ಮತ್ತೇಭ ವಿಕ್ರೀಡಿತ ವೃತ್ತದಲ್ಲಿ ಪ್ರತಿಸಾಲಿನಲ್ಲೂ ೨೦ ಅಕ್ಷರಗಳಿರುತ್ತವೆ. ವಿನ್ಯಾಸದಲ್ಲಿ "ಸಭರನಮಯ ಲಗು" ಗಣಗಳಿರುತ್ತವೆ. (ಲ-ಲಘು,ಗು-ಗುರು) == ಸೂತ್ರ ಪದ್ಯ == ಇದರ ಸೂತ್ರ ಪದ್ಯ ಹೀಗಿದೆ. ಸಭರಂನಂ ಮಯಲಾಗಮುಂ ಬಗೆಗೊಳಲ್ ಮತ್ತೇಭವಿಕ್ರೀಡಿತಂ ಇದರ ಪ್ರಸ್ತಾರ ವಿನ್ಯಾಸ ಹೀಗಿದೆ; == ಮತ್ತೇಭವಿಕ್ರೀಡಿತ ವೃತ್ತ ಅಕ್ಷರ ವಿನ್ಯಾಸ == == ಮತ್ತೇಭವಿಕ್ರೀಡಿತ ವೃತ್ತದ ಬಗೆಗೆ ಚರ್ಚೆ == ಸಂಸ್ಕೃತ ವಾಙ್ಮಯದಲ್ಲಿ ಇದು ಹೆಚ್ಚೇನೂ ಬಳಕೆಯಲ್ಲಿಲ್ಲ. ಕನ್ನಡದಲ್ಲಿ ಮತ್ತೇಭ ವಿಕ್ರೀಡಿತದ ಪದ್ಯಗಳು ವಿಫುಲವಾಗಿ ಸಿಗುತ್ತವೆ. ಇದು ಶಾರ್ದೂಲವಿಕ್ರೀಡಿತ ಪದ್ಯದ ಮೊದಲ ಗುರುವನ್ನು ಲಘುಗಳೆರಡರಿಂದ ಬದಲಾಯಿಸಿದಾಗ ಬರುತ್ತದೆ. ಉದಾಹರಣೆ ಜಗದೊಳ್ ಸನ್ನಿದಮಾದ ನಾಳ್ನುಡಿಗಳಿಂ ಛಂದಕ್ಕೆ ಬರ್ಪಂತು ನೆ- ಟ್ಟಗೆ ಮಾತಾಡುವ ಬಲ್ಮೆ ಚಿತ್ತದೊಳೊರಲ್ದಿರ್ದರ್ಥಮಂ ಕೂಡೆ ನಾ- ಲಗೆಯಿಂ ರಂಜಿಸುವೊಂದು ಬಿನ್ನಣಮದಿನ್ನಾಂಗೆ ಪುಣ್ಯೈಕಭಾ- ಗಿಗೆ ಸೈಪಿಂ ದೊರೆಕೊಳ್ವುಮಾತನೆ ವಲಂ ಶೃಂಗಾರರತ್ನಾಕರಂ|| ಎಸಕಂಬೆತ್ತ ಮತಿಪ್ರಕಾಶ ಮದನಿನ್ನೇನೆಂದಪೆಂ ಚೇಟಿ ನಾಲ್- ದೆಸೆಯೊಳ್ ನಾಲ್ವರ ಕಂಟದೊಳ್ ಬರೆಯೆ ಕಬ್ಬಂ ಬೇಳ್ವನೊಲ್ದತ್ತಲಾ- ಡಿಸುವಂ ನೆತ್ತಮನಿತ್ತಲೋಲಿದೊಡೆ ತಪ್ಪಂ ಪೇಳ್ದುದಂ ತಿರ್ದಿಯಾ- ಲಿಸುವಂ ಗೀತಮನೆನ್ನುವಂ ನಗಿಸುವಂ ಶೃಂಗಾರರತ್ನಾಕರಂ|| (ಕವಿಕಾಮನ ಶೃಂಗಾರರತ್ನಾಕರ ೧-೬,೭) == ಉಲ್ಲೇಖ ==